ರೆಕ್ಸ್ ಹ್ಯಾರಿಸನ್ (ಮಾರ್ಚ್ ೫, ೧೯೦೮ - ಜೂನ್ ೨, ೧೯೯೦) ಇಂಗ್ಲೆಂಡ್ ಮೂಲದ ಹಾಲಿವುಡ್ ನಟ. ಮೈ ಫೇರ್ ಲೇಡಿ' ಚಲನ ಚಿತ್ರದಲ್ಲಿ 'ಪ್ರೊಫೆಸರ್ ಹಿಗಿನ್ಸ್' ಪಾತ್ರವಹಿಸಿ ಒಂದು ದಾಖಲೆಯನ್ನೇ ಸೃಷ್ಟಿಸಿದ ರೆಕ್ಸ್ ಹ್ಯಾರಿಸನ್, ಪ್ರತಿಭೆಯ ಖಣಿ. ಈ ಚಿತ್ರದಲ್ಲಿ ನಟಿ, 'ಆಡ್ರಿ ಹೆಪ್ಬರ್ನ್, ಅತ್ಯಂತ ಹೃದಯಂಗಮ ನಟನೆಯನ್ನು ಪ್ರದರ್ಶಿಸಿ ಜನರ ಮನಸ್ಸನ್ನು ಸೂರೆಗೊಂಡರು. ಚಿತ್ರದ ಮೊದಲಿನಿಂದ ಕೊನೆಯವರೆವಿಗೆ, ಇವರಿಬ್ಬರೇ ವಿಜೃಂಭಿಸುತ್ತಾರೆ. ಚಿತ್ರದಲ್ಲಿ ಅಳವಡಿಸಿದ, ಸಂಗೀತ ರಸಿಕರ ಮನಸ್ಸನ್ನು ತಣಿಸುವಲ್ಲಿ ಯಶಸ್ವಿಯಾಗಿದೆ.